
ನನ್ನ ಹೆಸರು ಗೆಳೆಯ; ನಿನ್ನ ಹೆಸರೇನು?
ಎಲ್ಲಿಂದ ಬಂದೆ ? ಏನು ಮಾಡುವೆ ಮುಂದೆ ?
ಎನುವ ಪ್ರಶ್ನೆಗಳಿಂದ ಪಲ್ಲವಿಸಿತು ನಮ್ಮ ಪರಿಚಯ!
ತುಂಟಾಟ, ಹುಡುಗಾಟಗಳಲ್ಲಿನ ಸಲಿಗೆ ಸಲೆಹೆಗಳು 
ನಮ್ಮ ಸ್ನೇಹಕ್ಕೆ ಸೇತುವೆಯಾದವು.
ಗೆದ್ದಾಗ ಪ್ರತಿಭೆಯನ್ನು ಪ್ರೋತ್ಸಾಹಿಸಿ.....ಬೆನ್ನುತಟ್ಟಿ 
ಸೋತಾಗ ಚೈತನ್ಯದ ಛಲವನ್ನು ಮನದುಂಬಿ
ಬಾಳಿನ ದಾರಿಗೆ ಭರವಸೆಯ ಬೆಳಕು
ಮೂಡಿಸಿದರು ಗೆಳೆಯರು .
ನೋಡುನೋಡುತ್ತಾಲೆ ಕಳೆದೊದವು, ಸೊಗಸಿನ.....ಕ್ಷಣಗಳು 
ಕನಸಿನ ಕ್ಷಣಗಳಾಗಿ.
ಮಾತಾಡುತ್ತಾಲೆ, ಮರೆಯಾದವು ಸಂತಸದ ದಿನಗಳು
ಮರೆಯದ.....ಮರುದಿನಗಳಾಗಿ.
ನಡೆನಡೆಯುತ್ತಲೆ ಜೋತೆಗೊಡಿದವು..... ಜೋಡಿ ಹೆಜ್ಜೆಗಳು 
ಜೋಪಾನವಾಗಿ 
ಜೊತೆಜೊತೆಯಲ್ಲಿ.....ಜೀವನ ಜಾರಿಗೊಳಿಸಲು 
ಜನುಮದ ಜೋಡಿಯಾಗಿ .
ಮತ್ತೆ ಈ ನೆನಪುಗಳು ಮರುಕಳಿಸುತ್ತಿವೆ
ಬಾಳಿನ ಪುಟಗಳಲ್ಲಿ ಸವಿನೆನಪುಗಳಾಗಿ 
ಬಾಡದ ಭಾವನೆಗಳ, ಕಾಡಿದ ಕನಸುಗಳ, ಕನವರಿಕೆಗಳು 
ಕಣ್ತುಂಬಿ ಜಾರುತಿವೆ ನೆನಪಿನ ಹನಿಗಳು 
ಕೆನ್ನೆಯಮೇಲೆ ಸಿಹಿ ಮುತ್ತುಗಳಾಗಿ............
 
