ಭಾನುವಾರ, ಅಕ್ಟೋಬರ್ 25, 2009

ಪರಭಾಷೆಯ.........ಗೆಳೆಯನಿಗಾಗಿ.


ನೀ ಮಾತಾಡು.... ಕನ್ನಡದಿ
ನಿನ್ನ ಮನಸು ಕಾಣುವುದು ಮಂದಹಾಸವನು
ಒಮ್ಮೆ ಕಿವಿಗೊಟ್ಟು ಕೇಳು ಕನ್ನಡದ ಕವಿತೆಯ ಮನಸಾರೆ
ನಿನ್ನ ಉಸಿರು ಕಾಣುವುದು ಉಲ್ಲಾಸವನ್ನು
.

ನೀ ಓದು ಕನ್ನಡ.... ಕಾವ್ಯವನ್ನು
ನಿನ್ನ ಕಣ್ಣಲ್ಲಿ ಜಿನುಗುವುದು ನೊರೆಂಟು ಕನಸುಗಳು
ಒಮ್ಮೆ ಬರೀ ನೀ ಕನ್ನಡವನ್ನು
ನಿನ್ನ ಕೈ ಬರೆಯುವುದು ಹೊಂಗನಸಿನ ಕವನಗಳನ್ನು.

ನೀ ಸ್ನೇಹಮಯಿಯಾಗು.... ಕನ್ನಡಿಗನಿಗೆ
ನಿನಗೆ ತ್ಯಾಗಮಯಿಯಾಗುವನು ಕನ್ನಡಿಗ
ಭಾತೃತ್ವ ನೀಡು ನೀ ಕನ್ನಡಿಗನಿಗೆ
ನಿನ್ನಗೆ ಭಾಂದವ್ಯಧಾತನಾಗುವನು ಕನ್ನಡಿಗ .

ನೀ ಅಭಿಮಾನಿಸು.... ಕನ್ನಡವನ್ನು
ನಿನ್ನ ಅಭಿಮಾನಿಸುವರು ನಮ್ಮ ಜನ
ನೀ ಪೂಜಿಸು ಕನ್ನಡವನ್ನು
ನಿನ್ನ ಆರಾಧಿಸುವರು ನಮ್ಮಜನ.

ನೀ ಪ್ರೀತಿಸು.... ಕನ್ನಡವನ್ನು
ನಿನ್ನ ಪ್ರೀತಿಸುವರು ಕನ್ನಡ ಜನ
ನೀ ಮರೆಯದಿರು ಕನ್ನಡವನ್ನು
ನಿನ್ನ ಮರೆಯರು ಕನ್ನಡ ಜನ.

ನೀ ಕಾಪಾಡು.... ಕನ್ನಡವನ್ನು
ನಿನ್ನ ಕಾಪಾಡುವುದು ನಿನ್ನ ಗುಣ .

1 ಕಾಮೆಂಟ್‌: