ಶುಕ್ರವಾರ, ಫೆಬ್ರವರಿ 5, 2010

ನವಯುಗದ ತಾರೆಗಳು

ಇವರು ನಮ್ಮವರು ನಮ್ಮೊಳಗಿರುವವರು
ನವಯುಗದ ತಾರೆಗಳು
ಕನ್ನಡಮ್ಮನ ಕನಸಿನ ಕುಡಿಗಳು
ಭಾರತಾಂಬೆಯ ಭವಿಷ್ಯದ ಬೆಳಕಾಗಿ
ಕತ್ತಲೆಯ ಓಡಿಸಲು ಉಅದಯಿಸಿರುವ
ಹೊಂಬೆಳಕಿನ ಹೊಂಗಿರಣಗಳು.....

ಪರಿಸರ ಮಾತೆಯ ಮಡಿಲ ಮಕ್ಕಳು
ಸಕಲ ಚರಾಚರಗಳ ಗೆಳೆಯರಿವರು
ಸ್ನೇಹಕ್ಕೆ ಕೈ ಜೋಡಿಸುವರು ಪ್ರೀತಿಗೆ ಜೈ ಎನ್ನುವರು
ಭಾತೃತ್ವದ ಬಂಧ ಬೆಸೆವ ಬಾಂಧವ್ಯದಾತರು......

ನೋವಿನ ಕಣ್ಣೀರೊರೆಸುವ ಕರುಣಾಮಯರು
ಸಮಸ್ಯೆಗಳಿಗೆ ಸ್ಪಂದಿಸುವ ಹೃದಯಸಂಪನ್ನರು
ಅನ್ಯಾಯ ಸಹಿಸದ ಧೀಮಂತರು
ಅಕ್ರಮಗಳ ಆಕ್ರಮಸಿ ಹಂಚುವ ಆಶ್ರಯದಾತರು.....

ಹಿರಿಯರ ಹಿತೈಶಿಗಳು, ಕಿರಿಯರ ಸ್ಪೂರ್ತಿದಾಯಕರು
ಬೆಳೆಯುವ ಮೊಳಕೆಗಳಿಗೆ ಪೋಷಕಾಂಶಗಳ
ಪೂರೈಸುವ ಪೋಷಕರು.
ಮೊಗ್ಗಿನ ಮನಗಳ ಹೃದಯ ಚೋರರು
ಅರಳುವ ಕನಸುಗಳ ಆರಾಧ್ಯರು......

ಸೋಮವಾರ, ಅಕ್ಟೋಬರ್ 26, 2009

ಸ್ನೇಹದಿಂದ.....ಸವಿನೆನಪಿನವರೆಗೆ.



ನನ್ನ ಹೆಸರು ಗೆಳೆಯ; ನಿನ್ನ ಹೆಸರೇನು?
ಎಲ್ಲಿಂದ ಬಂದೆ ? ಏನು ಮಾಡುವೆ ಮುಂದೆ ?
ಎನುವ ಪ್ರಶ್ನೆಗಳಿಂದ ಪಲ್ಲವಿಸಿತು ನಮ್ಮ ಪರಿಚಯ!
ತುಂಟಾಟ, ಹುಡುಗಾಟಗಳಲ್ಲಿನ ಸಲಿಗೆ ಸಲೆಹೆಗಳು
ನಮ್ಮ ಸ್ನೇಹಕ್ಕೆ ಸೇತುವೆಯಾದವು.

ಗೆದ್ದಾಗ ಪ್ರತಿಭೆಯನ್ನು ಪ್ರೋತ್ಸಾಹಿಸಿ.....ಬೆನ್ನುತಟ್ಟಿ
ಸೋತಾಗ ಚೈತನ್ಯದ ಛಲವನ್ನು ಮನದುಂಬಿ
ಬಾಳಿನ ದಾರಿಗೆ ಭರವಸೆಯ ಬೆಳಕು
ಮೂಡಿಸಿದರು ಗೆಳೆಯರು .

ನೋಡುನೋಡುತ್ತಾಲೆ ಕಳೆದೊದವು, ಸೊಗಸಿನ.....ಕ್ಷಣಗಳು
ಕನಸಿನ ಕ್ಷಣಗಳಾಗಿ.
ಮಾತಾಡುತ್ತಾಲೆ, ಮರೆಯಾದವು ಸಂತಸದ ದಿನಗಳು
ಮರೆಯದ.....ಮರುದಿನಗಳಾಗಿ.
ನಡೆನಡೆಯುತ್ತಲೆ ಜೋತೆಗೊಡಿದವು..... ಜೋಡಿ ಹೆಜ್ಜೆಗಳು
ಜೋಪಾನವಾಗಿ
ಜೊತೆಜೊತೆಯಲ್ಲಿ.....ಜೀವನ ಜಾರಿಗೊಳಿಸಲು
ಜನುಮದ ಜೋಡಿಯಾಗಿ .

ಮತ್ತೆ ಈ ನೆನಪುಗಳು ಮರುಕಳಿಸುತ್ತಿವೆ
ಬಾಳಿನ ಪುಟಗಳಲ್ಲಿ ಸವಿನೆನಪುಗಳಾಗಿ
ಬಾಡದ ಭಾವನೆಗಳ, ಕಾಡಿದ ಕನಸುಗಳ, ಕನವರಿಕೆಗಳು
ಕಣ್ತುಂಬಿ ಜಾರುತಿವೆ ನೆನಪಿನ ಹನಿಗಳು
ಕೆನ್ನೆಯಮೇಲೆ ಸಿಹಿ ಮುತ್ತುಗಳಾಗಿ............


ಭಾನುವಾರ, ಅಕ್ಟೋಬರ್ 25, 2009

ಪರಭಾಷೆಯ.........ಗೆಳೆಯನಿಗಾಗಿ.


ನೀ ಮಾತಾಡು.... ಕನ್ನಡದಿ
ನಿನ್ನ ಮನಸು ಕಾಣುವುದು ಮಂದಹಾಸವನು
ಒಮ್ಮೆ ಕಿವಿಗೊಟ್ಟು ಕೇಳು ಕನ್ನಡದ ಕವಿತೆಯ ಮನಸಾರೆ
ನಿನ್ನ ಉಸಿರು ಕಾಣುವುದು ಉಲ್ಲಾಸವನ್ನು
.

ನೀ ಓದು ಕನ್ನಡ.... ಕಾವ್ಯವನ್ನು
ನಿನ್ನ ಕಣ್ಣಲ್ಲಿ ಜಿನುಗುವುದು ನೊರೆಂಟು ಕನಸುಗಳು
ಒಮ್ಮೆ ಬರೀ ನೀ ಕನ್ನಡವನ್ನು
ನಿನ್ನ ಕೈ ಬರೆಯುವುದು ಹೊಂಗನಸಿನ ಕವನಗಳನ್ನು.

ನೀ ಸ್ನೇಹಮಯಿಯಾಗು.... ಕನ್ನಡಿಗನಿಗೆ
ನಿನಗೆ ತ್ಯಾಗಮಯಿಯಾಗುವನು ಕನ್ನಡಿಗ
ಭಾತೃತ್ವ ನೀಡು ನೀ ಕನ್ನಡಿಗನಿಗೆ
ನಿನ್ನಗೆ ಭಾಂದವ್ಯಧಾತನಾಗುವನು ಕನ್ನಡಿಗ .

ನೀ ಅಭಿಮಾನಿಸು.... ಕನ್ನಡವನ್ನು
ನಿನ್ನ ಅಭಿಮಾನಿಸುವರು ನಮ್ಮ ಜನ
ನೀ ಪೂಜಿಸು ಕನ್ನಡವನ್ನು
ನಿನ್ನ ಆರಾಧಿಸುವರು ನಮ್ಮಜನ.

ನೀ ಪ್ರೀತಿಸು.... ಕನ್ನಡವನ್ನು
ನಿನ್ನ ಪ್ರೀತಿಸುವರು ಕನ್ನಡ ಜನ
ನೀ ಮರೆಯದಿರು ಕನ್ನಡವನ್ನು
ನಿನ್ನ ಮರೆಯರು ಕನ್ನಡ ಜನ.

ನೀ ಕಾಪಾಡು.... ಕನ್ನಡವನ್ನು
ನಿನ್ನ ಕಾಪಾಡುವುದು ನಿನ್ನ ಗುಣ .